ಅಪಾಯಗಳಿಗೆ ಮುನ್ಸೂಚನೆ ನೀಡುವ ಪ್ರಾಣಿಲೋಕ!

ಅಪಾಯಗಳಿಗೆ ಮುನ್ಸೂಚನೆ ನೀಡುವ ಪ್ರಾಣಿಲೋಕ!

ಇದ್ದಕ್ಕಿದ್ದಂತೆ ನೈಸರ್‍ಗಿಕ ವಿಕೋಪಗಳಾಗಿ ಸಾವಿರಾರು ಜನ ಸತ್ತುಹೋದರು. ನೂರಾರು ಜನ ಭೂಕಂಪದಲ್ಲಿ ಮಡಿದರು, ಸಮುದ್ರ ಬಿರುಗಾಳಿಯಿಂದ ನೌಕೆಗಳು ಅಪ್ಪಳಿಸಿದವು! ಮುಂತಾದ ವರದಿಗಳನ್ನು ನೋಡುತ್ತೇವೆ. ಇದೆಲ್ಲ ಅನಿರಿಕ್ಷಿತ ಮತ್ತು ಇದ್ವಕ್ಕಿದ್ದಂತೆ ಆಕ್ರಮಿಸಿಕೊಂಡ ಆಘಾತವೆಂದು ಅಂದು ಕೊಳ್ಳುತ್ತವೆ. ಆದರೆ ಇಂಥಹ ಅಪಾಯಗಳನ್ನು ಮುಂಚಿತವಾಗಿಯೇ ಮನಗಂಡ ಅನೇಕ ಪಕ್ಷಿ ಪ್ರಾಣಿಗಳು ನಮಗೆ ಅನೇಕ ಸೂಚನೆಗಳನ್ನು ನೀಡುತ್ತವೆ. ನಾವು ಗಮನಿಸುವುದೇ ಇಲ್ಲ. ಈಗ ನೋಡಿ ಪ್ರಾಣಿ, ಪಕ್ಷಿ, ಜಲಚರಗಳು ಅಪಾಯಗಳ ಮುನ್ಸೂಚನೆಯನ್ನು ಹೀಗೆ ನೀಡುತ್ತದೆ. (ವೈಜ್ಞಾನಿಕವಾಗಿ ಕಂಡು ಹಿಡಿಯಲಾಗಿದೆ.) ಹಾವು ಮತ್ತು ಇಲಿಗಳು ತಮ್ಮ ಬಿಲಗಳನ್ನು ಬಿಟ್ಟು ದಿಕ್ಕೆಟ್ಟು ಓಡುತ್ತವೆ. ಮೀನುಗಳು ನೀರಿನಿಂದ ಹಾರುತ್ತವೆ. ಆಕ್ವೇರಿಯಂ ಮೀನುಗಳು ಡಿಕ್ಕಿ ಹೊಡೆಯುತ್ತವೆ. ಆಮೆಗಳು ಪಲ್ಟಿ ಹೊಡೆಯುತ್ತ ಧಾವಿಸುತ್ತದೆ. ದನ, ಕರು, ಕುರಿ, ಮತ್ತು ಕುದುರೆಗಳು ತಾವು ಇರುವ ಸ್ಥಳಕ್ಕೆ ಹೋಗುವದಿಲ್ಲ, ಕೋಳಿಮರಿಗಳು ಗಿಡ ಏರುತ್ತವೆ. ಬಾತು ಕೋಳಿಗಳು ನೀರಿಗೆ ಹೋಗಲು ನಿರಾಕರಿಸುತ್ತವೆ. ನಾಯಿಗಳು ವಿನಾಕಾರಣ ಬೊಗಳುತ್ತವೆ, ಹಂದಿಗಳು ಪರಸ್ಪರ ಕಚ್ಚಾಡುತ್ತವೆ. ಜಿಂಕೆಗಳು ದಿಕ್ಕೆಟ್ಟು ಓಡುತ್ತವೆ ಮತ್ತು ಜಿರಳೆಗಳು ವೃತ್ತಾಕಾರವಾಗಿ ಸುತ್ತುತ್ತವೆ. ಇದೆಲ್ಲ ಕ್ರಿಯೆ ನಡೆಯುವದು ಭೂಕಂಪದ ಮುನ್ಸೂಚನೆಯನ್ನು ತಿಳಿಸುತ್ತದೆ. ಜ್ವಾಲಾಮುಖಿ, ಬಿರುಗಾಳಿ, ಅಥವಾ ನೈಸರ್‍ಗಿಕ ವಿಕೋಪಗಳಾದರೆ, ಜೆಲ್ಲಿ ಮೀನು ೧೦-೧೫ ಗಂಟೆಗಳ ಮೊದಲೇ ಬಿರುಗಾಳಿಯ ಮುನ್ಸೂಚನ ಅರಿಯುತ್ತದೆ. ಆದ್ದರಿಂದ ಸಮುದ್ರ ದಂಡೆಯಿಂದ ಸಮುದ್ರದಾಳಕ್ಕೆ ಹೋಗುತ್ತದೆ. ಕೇಡುಗಾಲ ಬಂದಾಗ ಅದನ್ನರಿತ ಮೀನು ಸಮುದ್ರದಾಳದ ಮೀನು ನೀರಿನ ಮೇಲೆ ಬರುತ್ತದೆ. ಆರ್‍ಕ್ಟಿಕ್ ಪ್ರದೇಶದಲ್ಲಿ ವಾಸಿಸುವ ಟಾರಾಮಿಗಾನ್ ಎಂಬ ಹಕ್ಕಿಯನ್ನು ಪಕ್ಷಿ ಸಂಕುಲದ ಜೋತಿಷಿ ಎಂದೇ ಗುರುತಿಸಲಾಗುತ್ತದೆ. ಏಕೆಂದರೆ ತನ್ನ ಪರಿಸರದಲ್ಲಿ ಮುಂದೆ ಆಗಲಿರುವ ಬದಲಾವಣೆಗಳನ್ನು ಗುರುತಿಸುತ್ತದೆ. ವೈಪರಿತ್ಯವಾದ ಸೂಚನೆಗಳೆನಾದರೂ ತಿಳಿದರೆ ಅಲ್ಲಿಂದ ಜಾಗ ಖಾಲಿಮಾಡಿ ಬಿಡುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಳೆಯ ನಾಣ್ಯ
Next post ಭೂಮದ ಹಾಡು

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys